ಇವಳು

ಅಂತರ್ಮುಖಿ

Posted by: yarivalu on: December 2, 2008

p43
ಶಬ್ದಗಳಲ್ಲಿ
ಹಿಡಿಯಲಾಗದ
ವೇದನೆಗಳಿಗೆ
ನಾನು
ಕಣ್ಣೀರಾದಾಗಲೆಲ್ಲ
ಅವನು
ಅಂತರ್ಮುಖಿ

ಶಿಷ್ಟಾಚಾರ

Posted by: yarivalu on: December 2, 2008

p42
ನನ್ನ
ಪ್ರೀತಿಗೆ
ಸಭ್ಯತೆ
ಶಿಷ್ಟಾಚಾರ
ಗೊತ್ತಿಲ್ಲ
ಹಾಗಂತಲೇ
ನಾನು
ನನ್ನ
ಗೀತೆಗಳಿಗೆ
ಸಭ್ಯತೆ
ಕಲಿಸಿಲ್ಲ

ನನ್ನ ಹಾಡು

Posted by: yarivalu on: December 2, 2008

p411
ನನ್ನ ಕವಿತೆಗಳಿಗೆ
ಛಂದಸ್ಸುಗೊತ್ತಿಲ್ಲ
ಹಾಡುಗಳಿಗೆ
ತಾಳ ತಿಳಿದಿಲ್ಲ
ಆದರೂ
ನನ್ನ
ಕವಿತೆ-ಹಾಡುಗಳ
ಮೂಲಕ
ಅವನನ್ನು
ತಲುಪುತ್ತೇನೆ

ನಗು

Posted by: yarivalu on: December 2, 2008

s383
ನನ್ನ
ಕಣ್ಣೀರಿಗಿಂತ
ಹೆಚ್ಚಾಗಿ
ವಿನಾಕಾರಣದ
ನಗುವಿನಿಂದಾಗಿ
ಅವನು
ಸಂಕಟಪಡುತ್ತಾನೆ

ಸತ್ಯ

Posted by: yarivalu on: October 7, 2008


ಸಾವಿರ
ಸುಳ್ಳು
ಹೇಳಿದರೂ
ಅವನು
ಮಾತ್ರ
ಸತ್ಯ

ಶಕ್ತಿ

Posted by: yarivalu on: October 7, 2008


ನನ್ನವನ
ತೋಳ
ಬಂಧನದ
ಶಕ್ತಿಗೆ
ಬೆಟ್ಟ
ಬೆಟ್ಟಗಳೇ
ನುಚ್ಚುನೂರಾಗುತ್ತವೆ

ಋಜುತ್ವ

Posted by: yarivalu on: October 7, 2008


ನನ್ನ
ಕವಿತ್ವ
ಮತ್ತದರ
ಋಜುತ್ವವನ್ನು
ಅವನ
ನಿಟ್ಟುಸಿರು
ನಿರ್ಧರಿಸುತ್ತದೆ

ಸೊನ್ನೆಯಾಗುವುದಿಲ್ಲ

Posted by: yarivalu on: October 7, 2008


ಎಷ್ಟೇ ಬಾರಿ
ಕೂಡಿ
ಕಳೆದು
ಭಾಗಿಸಿದರೂ
ನನ್ನವನು
ಸೊನ್ನೆಯಾಗುವುದಿಲ್ಲ

ಬೆತ್ತಲು

Posted by: yarivalu on: October 5, 2008


ನನ್ನವನು
ಗೀಚುವ
ಪ್ರತಿ ಚಿತ್ರದಲ್ಲೂ
ನಾನು
ಬೆತ್ತಲು
ಅವನು
ಬಟಾ ಬಯಲು

ಸಾವಿನಂತೆ

Posted by: yarivalu on: October 5, 2008


ನನ್ನವನು
ಸಾವಿನಂತೆ;
ಆವರಿಸಿಕೊಂಡರೆ
ಉಸಿರಾಡುವುದನ್ನೂ
ಮರೆತು ಬಿಡುತ್ತೇನೆ


  • None
  • singh: really intersting
  • greeshma: very nice poems . . . ತುಂಬ ಇಷ್ಟವಾಯಿತು.
  • jnanendra: ivalu napathe agi barobhari 12 dina aythu.wher is ivalu ?

Categories

Follow

Get every new post delivered to your Inbox.