ಇವಳು

Archive for October 2008

ಸತ್ಯ

Posted by: yarivalu on: October 7, 2008

ಸಾವಿರ ಸುಳ್ಳು ಹೇಳಿದರೂ ಅವನು ಮಾತ್ರ ಸತ್ಯ

ಶಕ್ತಿ

Posted by: yarivalu on: October 7, 2008

ನನ್ನವನ ತೋಳ ಬಂಧನದ ಶಕ್ತಿಗೆ ಬೆಟ್ಟ ಬೆಟ್ಟಗಳೇ ನುಚ್ಚುನೂರಾಗುತ್ತವೆ

ಋಜುತ್ವ

Posted by: yarivalu on: October 7, 2008

ನನ್ನ ಕವಿತ್ವ ಮತ್ತದರ ಋಜುತ್ವವನ್ನು ಅವನ ನಿಟ್ಟುಸಿರು ನಿರ್ಧರಿಸುತ್ತದೆ

ಸೊನ್ನೆಯಾಗುವುದಿಲ್ಲ

Posted by: yarivalu on: October 7, 2008

ಎಷ್ಟೇ ಬಾರಿ ಕೂಡಿ ಕಳೆದು ಭಾಗಿಸಿದರೂ ನನ್ನವನು ಸೊನ್ನೆಯಾಗುವುದಿಲ್ಲ

ಬೆತ್ತಲು

Posted by: yarivalu on: October 5, 2008

ನನ್ನವನು ಗೀಚುವ ಪ್ರತಿ ಚಿತ್ರದಲ್ಲೂ ನಾನು ಬೆತ್ತಲು ಅವನು ಬಟಾ ಬಯಲು

ಸಾವಿನಂತೆ

Posted by: yarivalu on: October 5, 2008

ನನ್ನವನು ಸಾವಿನಂತೆ; ಆವರಿಸಿಕೊಂಡರೆ ಉಸಿರಾಡುವುದನ್ನೂ ಮರೆತು ಬಿಡುತ್ತೇನೆ

ಕೊರಳಹಾರ

Posted by: yarivalu on: October 5, 2008

ಸಿಡುಕು ಮುನಿಸು ಜಗಳದ ನಂತರ ನಾನವನ ಕೊರಳ ಹಾರವಾಗುತ್ತೇನೆ !

ಹುಚ್ಚಿ

Posted by: yarivalu on: October 5, 2008

ಪ್ರತಿ ಬಾರಿ ಅವನು ನನ್ನ ಪಾದ ಚುಂಬಿಸಿದಾಗಲೂ ನೆತ್ತರು ಧಿಮ್ಮನೆ ಮೆದುಳಿಗೆ ನುಗ್ಗಿ ನಾನು ಹುಚ್ಚಿಯಾಗುತ್ತೇನೆ

ಏಕಾಂತ

Posted by: yarivalu on: October 5, 2008

ಬಾ… ಎಂದು ಚೀರಿದಾಗಲೆಲ್ಲ ಅವನು ನಾಪತ್ತೆ ನೊಂದು ಏಕಾಂತ ಬಯಸಿದಾಗ ಓಡಿ ಬಂದು ಮಡಿಲ ಮಗುವಾಗುತ್ತಾನೆ !

ಅಹಂಕಾರ

Posted by: yarivalu on: October 5, 2008

ನನ್ನ ತಳಮಳಗಳಿಗೆಲ್ಲ ತಾನು ಕಾರಣನೆಂಬ ಭಾವವೇ ಅವನ ಅಹಂಕಾರ ಹೆಚ್ಚಿಸುತ್ತದೆ



  • None
  • singh: really intersting
  • greeshma: very nice poems . . . ತುಂಬ ಇಷ್ಟವಾಯಿತು.
  • jnanendra: ivalu napathe agi barobhari 12 dina aythu.wher is ivalu ?

Categories

Follow

Get every new post delivered to your Inbox.